ಬೆಂಗಳೂರು : ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಕೆಎಂಎಫ್ ನಂದಿನಿ ಹಾಲಿನ ಬೆಲೆ 2.10 ರೂ ಹೆಚ್ಚಳ ಮಾಡಿದೆ.
ಕೆಎಂಎಫ್ ಲೀಟರ್ ಹಾಲಿಗೆ 2.10 ರೂ ಹೆಚ್ಚಳ ಮಾಡಿದ್ದು, ಈ ಮೂಲಕ ರಾಜ್ಯದ ಜನತೆಗೆ ಹಾಲಿನ ದರದ ಬಿಸಿ ಮುಟ್ಟಿದೆ. ಈ ಪರಿಷ್ಕ್ರತ ದರ ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಪ್ರಮುಖವಾಗಿ ಸಣ್ಣ, ಮಧ್ಯಮ ರೈತರು ಹಾಗೂ ಹೆಚ್ಚು ಮಹಿಳಾ ರೈತರೇ ಹೈನೋದ್ಯಮವನ್ನು ಜೀವಪನೋಪಾಯದ ಮೂಲ ಕಸುಬನ್ನಾಗಿ ಅಳವಡಿಸಿಕೊಂಡಿರುವುದು ಹಾಗೂ ಹಾಲು ಉತ್ಪಾದನೆ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮತ್ತು ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಹಾಲು ಸಂಸ್ಕರಣೆ, ಸಾಗಾಣಿಕೆ, ಖರೀದಿ ದರಗಳಂತಹ ಎಲ್ಲಾ ಅಂಶಗಳನ್ನು ಪರಿಗಣಿಸಿ ದರ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.