ಬೆಂಗಳೂರು : ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ ಏರಿಕೆಯಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡಲಾಗುವುದು. ಹೆಚ್ಚಳ ಮಾಡಿದ ಹಾಲಿನ ದರ ರೈತರಿಗೆ ಸಿಗಲಿದೆ ಎಂದು ಅವರು ಹೇಳಿದರು. ಅಧಿವೇಶನ ಮುಗಿದ ಬಳಿಕ ಹಾಲಿನ ದರ ಏರಿಕೆಯಾಗಲಿದೆ. ಎಷ್ಟು ಏರಿಕೆಯಾಗುತ್ತದೆ ಎಂಬುದು ಇನ್ನೂ ಕೂಡ ಅಂತಿಮವಾಗಿಲ್ಲ ಎಂದರು.
ಹಾಲಿನ ದರ ಲೀ.ಗೆ 10 ರೂ ಹೆಚ್ಚಳಕ್ಕೆ ರೈತರು ಬೇಡಿಕೆ ಇಟ್ಟಿದ್ದಾರೆ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಇತ್ತೀಚೆಗೆ ಹೇಳಿದ್ದರು. ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು ಹಾಲಿನ ದರ ಲೀ.ಗೆ 10 ರೂ ಹೆಚ್ಚಳಕ್ಕೆ ರೈತರು ಬೇಡಿಕೆ ಇಟ್ಟಿದ್ದಾರೆ, ಹಾಲಿನ ದರ ಏರಿಕೆ ಸರ್ಕಾರದ ತೀರ್ಮಾನದ ಹಂತದಲ್ಲಿದೆ ಎಂದಿದ್ದಾರೆ. ಈ ಬೆನ್ನಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.