ಮಂಗಳೂರು : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಅಮಲು ಪದಾರ್ಥ ನೀಡಿ ಯುವತಿ ಮೇಲೆ ಯುವಕನೋರ್ವ ಅತ್ಯಾಚಾರ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಈ ಸಂಬಂಧ ಸಂತ್ರಸ್ತೆ ಯುವತಿ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅಲ್ಲದೇ ಅಣ್ಣನೂ ತನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವುದಾಗಿ ಯುವತಿ ಆರೋಪಿಸಿದ್ದಾಳೆ.
ಆ.8 ರಂದು ನನ್ನ ಮನೆಯ ಫ್ರಿಡ್ಜ್ ಕೆಟ್ಟು ಹೋಗಿತ್ತು, ಮನೆಯಲ್ಲಿ ಒಬ್ಬಳೇ ಇರುವುದರಿಂದ ಶಫಿನ್ ಗೆ ಕರೆ ಮಾಡಿ ರಿಪೇರಿಯವರನ್ನು ಮನೆಗೆ ಕರೆಸಿ ಫ್ರಿಡ್ಜ್ ರಿಪೇರಿ ಮಾಡಿಸಲು ಹೇಳಿದ್ದೆ, ಆತ ಬಂದು ಸರಿ ಮಾಡಿದ್ದನು. ನಂತರ ಎಲೆಕ್ಟ್ರಿಶಿಯನ್’ನನ್ನು ಬಿಟ್ಟು ಬರುವುದಾಗಿ ಹೇಳಿ ಶಫಿನ್ ಹೋಗಿದ್ದಾನೆ.ನಂತರ ಕೆಲಹೊತ್ತಿನ ಬಳಿಕ ಮನೆಗೆ ಶಫಿನ್ ವಾಪಸ್ ಬಂದಿದ್ದು, ಆತ ತಂದ ಹಣ್ಣಿನ ಜ್ಯೂಸ್ ಕುಡಿದು ನಿದ್ದೆಗೆ ಜಾರಿದೆ. ಬಳಿಕ ಎಚ್ಚರಗೊಂಡಾಗ ನನ್ನ ಮೇಲೆ ದೈಹಿಕ ಸಂಪರ್ಕ ನಡೆಸಿರುವುದು ಗೊತ್ತಾಗಿದೆ. ಅಲ್ಲದೇ ಮುಂದೆಯೂ ನನ್ನ ಜೊತೆ ಸಹಕರಿಸಬೇಕು ಇಲ್ಲವಾದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಘಟನೆ ಸಂಬಂಧ ಯುವತಿ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.