ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಘಟನೆ ನಡೆದಿದ್ದು, ಪುಂಡನೊಬ್ಬ ಕಾರು ಅಡ್ಡಗಟ್ಟಿ ದಾಂಧಲೆ ನಡೆಸಿದ ಘಟನೆ ನಡೆದಿದೆ.
ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನಹಳ್ಳಿಯಲ್ಲಿ ನಡೆದಿದೆ. ಕುಟುಂಬವೊಂದು ಕಾರಿನಲ್ಲಿ ಹೋಗುತ್ತಿದ್ದಾಗ ಪುಂಡನೊಬ್ಬ ಕಾರು ಅಡ್ಡಗಟ್ಟಿ ಈ ದಾಂಧಲೆ ನಡೆಸಿದ್ದಾನೆ.
ಪುಟ್ಟ ಮಗು ಇದೆ ಎಂದು ಹೇಳಿದ್ರೂ ಬಿಡದ ಪುಂಡ ಕಾರಿನ ವೈಪರ್ ಕಿತ್ತು ಹಾಕಿ , ಗ್ಲಾಸ್ ಒಡೆದು ಎಸ್ಕೇಪ್ ಆಗಿದ್ದಾನೆ. ಪುಂಡನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.