ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಮಗುವಿಗೆ ಎಚ್ ಎಮ್ ಪಿ ವಿ ವೈರಸ್ ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು, ಬೆಂಗಳೂರಲ್ಲಿ ಮತ್ತೊಂದು ‘HMPV’ ವೈರಸ್ ಕೇಸ್ ಪತ್ತೆಯಾಗಿದ್ದು, 3 ತಿಂಗಳ ಮಗುವಿಗೆ ಸೋಂಕು ಧೃಡವಾಗಿದೆ. 3 ತಿಂಗಳ ಮಗುವಿನಲ್ಲಿ ಎಚ್ ಎಮ್ ಪಿ ವಿ ವೈರಸ್ ಕಾಣಿಸಿಕೊಂಡಿದ್ದು, ಮಗು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ.
ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ವೈರಸ್ ಪತ್ತೆಯಾಗಿತ್ತು, ಇದು ಮೊದಲ ಭಾರತದಲ್ಲಿ ಮೊದಲ ಪ್ರಕರಣವಾಗಿತ್ತು. ಈ ಬೆನ್ನಲ್ಲೇ 3 ತಿಂಗಳ ಮಗುವಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಈ ಮೂಲಕ ಪ್ರಕರಣಗಳ ಸಂಖ್ಯೆ 2 ಕ್ಕೇರಿಕೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಮಗುವಿಗೆ ಜ್ವರ ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ವೇಳೆ ಮಗುವಿಗೆ ರಕ್ತ ಪರೀಕ್ಷೆ ಮಾಡಿಸಿದಾಗ ಹೆಚ್ ಎಂಪಿವಿ ವೈರಸ್ ಇರುವುದು ಧೃಡವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
HMPV ಯ ಲಕ್ಷಣಗಳು
* ಕೆಮ್ಮು
* ಜ್ವರ
* ಮೂಗು ಕಟ್ಟುವಿಕೆ
* ಉಸಿರಾಟದ ತೊಂದರೆ
* ದೇಹದಲ್ಲಿ ನೋವು
* ತಲೆನೋವು