ಬೆಂಗಳೂರು : ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಮತ್ತೋರ್ವ ಬಾಂಗ್ಲಾ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿ ಠಾಣೆ ಪೊಲೀಸರು ಮೊಹಮದ್ ಸಿದ್ದಿಕ್ ಎಂಬಾತನನ್ನು ಬಂಧಿಸಿ ಎಫ್ ಐ ಆರ್ ದಾಖಲಿಸಿದ್ದಾರೆ.
ಶಾಲೆಯೊಂದರ ನಕಲಿ ವ್ಯಾಸಂಗ ಪ್ರಮಾಣ ಪತ್ರ ಪಡೆದು ನಕಲಿ ದಾಖಲೆ ಸೃಷ್ಟಿಸಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದನು. ಪಶ್ಚಿಮ ಬಂಗಾಳದ ಶಾಲೆಯೊಂದರಲ್ಲಿ ನಕಲಿ ವ್ಯಾಸಂಗ ಪ್ರಮಾಣ ಪತ್ರ ಪಡೆದು ನಕಲಿ ದಾಖಲೆಯೊಂದಿಗೆ 2006 ರಲ್ಲಿ ಈತ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದನು ಎನ್ನಲಾಗಿದೆ.ಕಾಡುಗೋಡಿಯ ದೊಡ್ಡಬನಹಳ್ಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಮೊಹಮದ್ ಸಿದ್ದಿಕ್ ನನ್ನು ಪೊಲೀಸರು ಬಂಧಿಸಿ ಎಫ್ ಐ ಆರ್ ದಾಖಲಿಸಿ ತನಿಖೆಗೊಳಪಡಿಸಿದ್ದಾರೆ.