ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ವಿವಿಧ ಕೇಂದ್ರ ಮತ್ತು ರಾಜ್ಯ ಪಡೆಗಳ 1,037 ಪೊಲೀಸ್ ಸಿಬ್ಬಂದಿಗೆ ಸೇವಾ ಪದಕಗಳನ್ನು ಸರ್ಕಾರ ಬುಧವಾರ ಪ್ರಕಟಿಸಿದೆ.ಕರ್ನಾಟಕದ 20 ಮಂದಿ ಸೇರಿ 1,037 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕ ಘೋಷಣೆ ಮಾಡಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, 214 ಸಿಬ್ಬಂದಿಗೆ ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪದಕ (ಪಿಎಂಜಿ) ಮತ್ತು 231 ಶೌರ್ಯ ಪದಕ (ಜಿಎಂ) ಸೇರಿದಂತೆ ಶೌರ್ಯ ಪದಕಗಳನ್ನು ನೀಡಲಾಗುವುದು.
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಗೆ ಗರಿಷ್ಠ 52, ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ 31, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ತಲಾ 17, ಛತ್ತೀಸ್ಗಢದಿಂದ 15 ಮತ್ತು ಮಧ್ಯಪ್ರದೇಶದಿಂದ 12 ಪೊಲೀಸ್ ಸಿಬ್ಬಂದಿಗೆ ಶೌರ್ಯ ಪದಕಗಳನ್ನು ನೀಡಲಾಗುತ್ತಿದೆ.
ಸಾರ್ಥಕ ಸೇವಾ ಪದಕ:
ಬಸವಲಿಂಗಪ್ಪ, ಸೀನಿಯರ್ ಕಮಾಂಡರ್, ಅಗ್ನಿಶಾಮಕ ದಳ
ಶ್ರೀನಾಥ್ ಎಂ. ಜೋಷಿ, ಲೋಕಾಯುಕ್ತ ಎಸ್‌ಪಿ
ಗೌರಮ್ಮ ಜಿ. ಎಎಸ್ಐ
ಸಿ.ಕೆ ಬಾಬಾ, ಬೆಂಗಳೂರು ಗ್ರಾಮಾಂತರ ಎಸ್‌ಪಿ
ಮಂಜುನಾಥ ಶೇಕಪ್ಪ ಕಲ್ಲೆದೇವರ್, ಸಬ್ ಇನ್ಸ್‌ಪೆಕ್ಟರ್
ಹರೀಶ್ ಹೆಚ್.ಆರ್, ಅಸಿಸ್ಟೆಂಟ್ ಕಮಾಂಡೆಂಟ್
ಎಸ್. ಮಂಜುನಾಥ, ಇನ್ಸ್‌ಪೆಕ್ಟರ್
ರಾಮಗೊಂಡ ಬೈರಪ್ಪ, ಕರ್ನಾಟಕ ಎಎಸ್‌ಪಿ
ಗಿರಿ ಕೃಷ್ಣಮೂರ್ತಿ, ಡಿಎಸ್‌ಪಿ
ಪಿ. ಮುರಳೀಧರ್, ಡಿಎಸ್‌ಪಿ
ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್
ಬಸವರಾಜು ಕಮ್ತಾನೆ, ಡಿಎಸ್‌ಪಿ
ರವೀಶ್ ನಾಯಕ್, ಎಸಿಪಿ
ಶರತ್ ದಾಸನಗೌಡ, ಎಸ್‌ಪಿ
ಪ್ರಭಾಕರ್ ಗೋವಿಂದಪ್ಪ, ಎಸಿಪಿ
ಗೋಪಾಲ್ ರೆಡ್ಡಿ, ಡಿಸಿಪಿ
ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್‌ಟೇಬಲ್
ಜುಲೈ 25, 2022 ರಂದು ಇಬ್ಬರು ಕುಖ್ಯಾತ ಸರಗಳ್ಳರು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆದಾರರನ್ನು ಬಂಧಿಸುವಲ್ಲಿ “ಅಪರೂಪದ ಶೌರ್ಯ” ಪ್ರದರ್ಶಿಸಿದ್ದಕ್ಕಾಗಿ ತೆಲಂಗಾಣ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಚದುವು ಯಾದಯ್ಯ ಅವರಿಗೆ ಶೌರ್ಯಕ್ಕಾಗಿ ಅತ್ಯುನ್ನತ ಪೊಲೀಸ್ ಗೌರವವಾದ ಏಕೈಕ ಪಿಎಂಜಿ ಪದಕವನ್ನು ಘೋಷಿಸಲಾಗಿದೆ.