ನವದೆಹಲಿ: 40 ಪ್ರಯಾಣಿಕರನ್ನು ಹೊತ್ತ ಭಾರತೀಯ ಪ್ರಯಾಣಿಕರ ಬಸ್ ಶುಕ್ರವಾರ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಬಿದ್ದಿದೆ ಎಂದು ನೇಪಾಳ ಪೊಲೀಸರನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ತನಾಹುನ್ ಜಿಲ್ಲಾ ಪೊಲೀಸ್ ಕಚೇರಿಯ ಡಿಎಸ್ಪಿ ದೀಪ್ಕುಮಾರ್ ರಾಯ ಅಪಘಾತವನ್ನು ದೃಢಪಡಿಸಿದ್ದಾರೆ . “ಯುಪಿ ಎಫ್ಟಿ 7623 ನಂಬರ್ ಪ್ಲೇಟ್ ಹೊಂದಿರುವ ಬಸ್ ನದಿಗೆ ಬಿದ್ದಿದೆ” ಎಂದು ತನಾಹುನ್ ಜಿಲ್ಲಾ ಪೊಲೀಸ್ ಕಚೇರಿಯ ಡಿಎಸ್ಪಿ ದೀಪ್ಕುಮಾರ್ ರಾಯ ತಿಳಿಸಿದ್ದಾರೆ.