ಹೈದರಾಬಾದ್ : ಜೈಲಿನಿಂದ ಬಿಡುಗಡೆಯಾದ ನಟ ಅಲ್ಲು ಅರ್ಜುನ್ ಅವರನ್ನು ರಿಯಲ್ ಸ್ಟಾರ್, ನಟ ಉಪೇಂದ್ರ ಭೇಟಿಯಾಗಿದ್ದಾರೆ.
‘ಯುಐ’ ಚಿತ್ರದ ಪ್ರಮೋಷನ್ ಗಾಗಿ ಹೈದರಾಬಾದ್ ಗೆ ತೆರಳಿದ್ದ ಉಪೇಂದ್ರ ನಟ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿ ಅಲ್ಲು ಅರ್ಜುನ್ ಮಾತನಾಡಿಸಿ ಬಂದಿದ್ದಾರೆ.
ಅಲ್ಲು ಅರ್ಜುನ್ ನಿವಾಸಕ್ಕೆ ನಟ ಚಿರಂಜೀವಿ ಸೇರಿ ಸಿನಿ ದಿಗ್ಗಜರ ತಂಡವೇ ಭೇಟಿ ನೀಡಿದೆ. ಹಲವು ನಟರು ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ.