ಯುವತಿ ಮೇಲೆಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಚರಿತ್ ಬಾಳಪ್ಪ ನನ್ನು ಪೊಲೀಸರು ಬಂಧಿಸಿದ್ದಾರೆ.
ಆರ್ ಆರ್ ನಗರದ ಪೊಲೀಸರು ಕಿರುತೆರೆ ನಟ ಚರಿತ್ ಬಾಳಪ್ಪನನ್ನು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಯುವತಿ ಜೊತೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿರುವ ಆರೋಪ ಕೇಳಿಬಂದಿದೆ.
ಅಲ್ಲದೇ ಯುವತಿ ವಾಸ ಮಾಡುತ್ತಿದ್ದ ಮನೆಗೆ ನುಗ್ಗಿ ಚರಿತ್ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಹಣ ಕೊಡದೇ ಇದ್ದರೆ ಯುವತಿಯ ಖಾಸಗಿ, ಫೋಟೋ, ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾನೆ.ಯುವತಿ ನೀಡಿದ ದೂರಿನ ಮೇರೆಗೆ ಚರಿತ್ ಬಾಳಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಚರಿತ್ ಬಾಳಪ್ಪಗೆ ಈಗಾಗಲೇ ಮದುವೆ ಆಗಿದ್ದು, ಪತ್ನಿ ಜೊತೆ ಕಿರಿಕ್ ಮಾಡಿಕೊಂಡು ಡೈವೋರ್ಸ್ ಪಡೆದಿದ್ದರು . ಚರಿತ್ ಕನ್ನಡದ ಮುದ್ದುಲಕ್ಷ್ಮಿ ಸೇರಿದಂತೆ ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.