ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಯುನೈಟೆಡ್ ಸ್ಟೇಟ್ಸ್ ಭೇಟಿ ನೀಡಿ ಹಿಂತಿರುಗಿದ್ದಾರೆ. ಅವರು ಟೆಲ್ ಅವೀವ್ ಗೆ ಬಂದಿಳಿದ ಸ್ವಲ್ಪ ಸಮಯದ ನಂತರ ಟೆಲ್ ಅವಿವ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಮಧ್ಯ ಇಸ್ರೇಲ್ ನಾದ್ಯಂತ ವೈಮಾನಿಕ ದಾಳಿಯ ಡ್ರೋನ್ ಗಳು ಹಾರಾಟ ನಡೆಸಿವೆ. ಇಸ್ರೇಲಿ ಪಡೆಗಳು ಭದ್ರತಾ ಕ್ರಮ ಕೈಗೊಂಡು ಯೆಮೆನ್ ನಿಂದ ಹಾರಿಸಲಾದ ಕ್ಷಿಪಣಿಯನ್ನು ತಡೆಹಿಡಿದಿದೆ ಎಂದು ದೃಢಪಡಿಸಿದ್ದು, ಯಾವುದೇ ಗಾಯಗಳು ವರದಿಯಾಗಿಲ್ಲ.
ಕ್ಷಿಪಣಿ ದಾಳಿಯು ನಿರ್ದಿಷ್ಟವಾಗಿ ನೆತನ್ಯಾಹು ಅವರ ವಿಮಾನವನ್ನು ಗುರಿಯಾಗಿಸಿಕೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಪ್ರಧಾನಿ ಆಗಮಿಸಿದ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದ್ದು, ಉದ್ದೇಶಿತ ಗುರಿಯ ಬಗ್ಗೆ ಪ್ರಶ್ನೆ ಮೂಡಿಸಿದೆ.
ಯುಎಸ್ ಪ್ರವಾಸ ಮೊಟಕುಗೊಳಿಸಿದ ನೆತನ್ಯಾಹು
ಹೆಜ್ಬೊಲ್ಲಾ ಉಗ್ರಗಾಮಿಗಳ ವಿರುದ್ಧ ಇಸ್ರೇಲ್‌ನ ಯುದ್ಧದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಎದುರಿಸಲು ನೆತನ್ಯಾಹು ಈಗಾಗಲೇ ಯುನೈಟೆಡ್ ಸ್ಟೇಟ್ಸ್ ನಿಂದ ಹಿಂತಿರುಗಿದ್ದಾರೆ. ಇಸ್ರೇಲ್‌ನ ಭದ್ರತಾ ಪರಿಸ್ಥಿತಿಯು ಉದ್ವಿಗ್ನವಾಗಿದೆ, ವಿವಿಧ ಮೂಲಗಳಿಂದ ಕ್ಷಿಪಣಿ ಬೆದರಿಕೆ ಇದ್ದು, ಸಮರ್ಥವಾಗಿ ಎದುರಿಸಲು ಕ್ರಮ ಕೈಗೊಳ್ಳಲಾಗಿದೆ.