ಬೆಂಗಳೂರು : ಸ್ಯಾಂಡಲ್’ವುಡ್ ಡ್ರಗ್ಸ್ ಕೇಸ್ ನಲ್ಲಿ ನಟಿ ಸಂಜನಾ, ರಾಗಿಣಿಗೆ ಸಿಸಿಬಿ ಶಾಕ್ ನೀಡಿದ್ದು, ಹೈಕೋರ್ಟ್ ಆದೇಶ ರದ್ದುಕೋರಿ ಸಿಸಿಬಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ನಟಿ ಸಂಜನಾ ಮತ್ತು ರಾಗಿಣಿ ಎಫ್ ಐ ಆರ್ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್’ಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಡ್ರಗ್ಸ್ ಕೇಸ್ ನಲ್ಲಿ ಪ್ರಕರಣ ರದ್ದುಮಾಡುವಂತೆ ನಟಿಯರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅಂತೆಯೇ ನಟಿ ಸಂಜನಾ ಮತ್ತು ರಾಗಿಣಿ ಎಫ್ ಐ ಆರ್ ರದ್ದಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು.
ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗರ್ಲಾನಿ, ರಾಗಿಣಿಗೆ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿತ್ತು. ಸಿಸಿಬಿಯಿಂದ ನಟಿಯರು ಸೇರಿದಂತೆ ಡ್ರಗ್ಸ್ ಪೆಡ್ಲರ್ ಗಳ ಬಂಧನವಾಗಿತ್ತು. ಸಂಜನಾ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಏಕ ಸದಸ್ಯ ಪೀಠದಿಂದ ಎಫ್ಐಆರ್ ರದ್ದುಗೊಳಿಸಲಾಗಿತ್ತು.