ಬೆಂಗಳೂರು : ನಟ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.ಮಾರ್ಟಿನ್ ಸಿನಿಮಾದ ನಿರ್ಮಾಪಕರ ವಿರುದ್ಧ ನಿರ್ದೇಶಕ ಎಪಿ ಅರ್ಜುನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಸಿನಿಮಾ ರಿಲೀಸ್ ಮಾಡದಂತೆ ನಿರ್ಬಂಧ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಸಿನಿಮಾದ ನಿರ್ದೇಶಕನಾದರೂ ನನ್ನ ಹೆಸರು ಕೈ ಬಿಟ್ಟು ಸಿನಿಮಾದ ಪ್ರಚಾರ ಮಾಡಿದ್ದಾರೆ. ಸಿನಿಮಾ ಸಂಬಂಧಿತ ಒಪ್ಪಂದವನ್ನು ಅವರು ಪಾಲಿಸಿಲ್ಲ. ತಮ್ಮ ಹೆಸರು ಕೈ ಬಿಟ್ಟು ಚಿತ್ರ ಬಿಡುಗಡೆ ಮಾಡದಂತೆ ನಿರ್ಬಂಧ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಅಂದಹಾಗೆ ಈ ಚಿತ್ರವನ್ನು ವಾಸವಿ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ಉದಯ್ ಕೆ ಮೆಹ್ತಾ ಮತ್ತು ಸೂರಜ್ ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದು, ಧ್ರುವ ಸರ್ಜಾ ಅವರಿಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ಅಭಿನಯಿಸಿದ್ದಾರೆ. ಅನ್ವೇಶಿ ಜೈನ್, ಜಾರ್ಜಿಯಾ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ಸುಕೃತಾ ವಾಗ್ಲೆ, ನಿಕಿತಿನ್ ಧೀರ್, ನವಾಬ್ ಷಾ, ರೋಹಿತ್ ಪಾಠಕ್, ನಾಥನ್ ಜೋನ್ಸ್, ಉಳಿದ ಪಾತ್ರವರ್ಗದಲ್ಲಿದ್ದಾರೆ. ಕೆ ಎಂ ಪ್ರಕಾಶ್ ಹಾಗೂ ಎಂ ಎಸ್ ರೆಡ್ಡಿ ಸಂಕಲನ, ಗೋಪಿನಾಥ್ ಕೃಷ್ಣಮೂರ್ತಿ ಸಂಭಾಷಣೆ, ರಾಮ್ ಲಕ್ಷ್ಮಣ್, ಡಾ ಕೆ ರವಿವರ್ಮ, ಗಣೇಶ್, ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ, ಇಮ್ರಾನ್ ಸರ್ಧಾರಿಯಾ, ಮತ್ತು ವಿ ಮುರಳಿ ನೃತ್ಯ ನಿರ್ದೇಶನವಿದೆ.