ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮಧ್ಯಾಹ್ನ 2:45 ಕ್ಕೆ ಮುಂದೂಡಿಕೆಯಾಗಿದೆ.
ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ವಾದ ವಿವಾದಗಳನ್ನು ಆಲಿಸುತ್ತಿದೆ. ಇದೀಗ ಮಧ್ಯಾಹ್ನ 2:45 ಕ್ಕೆ ವಿಚಾಣೆ ಮುಂದೂಡಿದ್ದು, ಇಂದೇ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದ್ಯಾ..? ಅಥವಾ ಮತ್ತೆ ಮುಂದೂಡಿಕೆಯಾಗುತ್ತಾ ಕಾದು ನೋಡಬೇಕಾಗಿದೆ.