ಬೆಂಗಳೂರು : ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಎಂದು ನಟ ದರ್ಶನ್ ವಿಡಿಯೋ ಮೂಲಕ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ಕ್ಯಾಮೆರಾ ಮುಂದೆ ಬಂದು ಅಭಿಮಾನಿಗಳಿಗೆ ನಟ ದರ್ಶನ್ ಶಾಕಿಂಗ್ ನ್ಯೂಸ್ ನೀಡಿದ್ದಾರೆ.
ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಇಂತಿ ನಿಮ್ಮ ದಾಸ ದರ್ಶನ್ ಎಂದು ನಟ ದರ್ಶನ್ ಫೇಸ್ ಬುಕ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ನಾನು ಏನೇ ಪದ ಬಳಕೆ ಮಾಡಿದರೂ ಅದು ಕಮ್ಮಿ, ನೀವು ತೋರಿಸಿದ ಅಭಿಮಾನ ಬಹಳ ದೊಡ್ಡದು…ಮುಂದಿನ ವಾರ ನನ್ನ ಬರ್ತ್ ಡೇ ಇದೆ… ನನಗೂ ತುಂಬಾ ಆಸೆ ಇತ್ತು..ಎಲ್ಲರನ್ನೂ ಮೀಟ್ ಮಾಡಬೇಕೆಂದು..ಆದರೆ ನನಗೆ ಹೆಲ್ತ್ ಪ್ರಾಬ್ಲಂ ಇದೆ..ತುಂಬಾ ಹೊತ್ತು ನಿಲ್ಲಲು ಆಗುತ್ತಿಲ್ಲ… . ಖಂಡಿತ ಮುಂದೆ ಸಿಗ್ತೀನಿ. ಸಲ್ಪ ದಿನ ಹೋಗಲಿ ಎಂದಿದ್ದಾರೆ.ಯಾವ ಊಹಾಪೋಹಗಳಿಗೂ ನನ್ನ ಸೆಲೆಬ್ರಿಟಿಗಳು ಕಿವಿಗೆ ಹಾಕ್ಕೋಬೇಡಿ. ನಾನು ಪ್ರೇಮ್ ಖಂಡಿತ ಸಿನಿಮಾ ಮಾಡ್ತೀವಿ. ಎಂದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾದ ನಟ ದರ್ಶನ್ ಗೆ ಹೈಕೋರ್ಟ್ ಜಾಮೀನು ನೀಡಿದೆ. ಸದ್ಯ ಜಾಮೀನಿನ ಮೇಲೆ ಹೊರಗಡೆ ಇರುವ ನಟ ದರ್ಶನ್ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.
ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ
ಇಂತಿ ನಿಮ್ಮ ದಾಸ ದರ್ಶನ್ pic.twitter.com/ERczhYj6DC
— Darshan Thoogudeepa (@dasadarshan) February 8, 2025