ಹಾಸನ : ಪ್ರಿಯತಮೆ ಕಾಟಕ್ಕೆ ಬೇಸತ್ತು ವಿಡಿಯೋ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕಲೇಶಪುರದ ಬಾಳೆಗದ್ದೆಯಲ್ಲಿ ನಡೆದಿದೆ.
ನನ್ನ ಸಾವಿಗೆ ಅಂಜಲಿ ಎಂಬ ಯುವತಿ ಕಾರಣ ಎಂದು ಆರೋಪ ಮಾಡಿ ವಿಷ ಸೇವಿಸಿ ಕವನ್ ಎಂಬ ಯುವಕ ಸೂಸೈಡ್ ಮಾಡಿಕೊಂಡಿದ್ದಾನೆ.
ನನ್ನ ಬಾಳಲ್ಲಿ ಅವಳು ಬಂದಳು, ನಂತರ ಅವಳ ನಡವಳಿಕೆ ಕಂಡು ದೂರವಾದೆ. ನನ್ನ ವಿರುದ್ಧ ಅವಳು ದೂರು ನೀಡಿದಳು. ನಾನು ಹುಡುಗ ಎಂಬ ಕಾರಣಕ್ಕೆ ನನ್ನ ದೂರನ್ನು ಪೊಲೀಸರು ತೆಗೆದುಕೊಂಡಿಲ್ಲ ಎಂದು ದೂರಿದ್ದಾನೆ.