ಹೈದರಾಬಾದ್ : ತೆಲಂಗಾಣದ ಜೋಗುಲಾಂಬಾ ಗಡ್ವಾಲ್ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನಡು ರಸ್ತೆಯಲ್ಲಿ ವೋಲ್ವೋ ಬಸ್ ಹೊತ್ತಿ ಉರಿದು ಮಹಿಳೆಯೊಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ.
ಜೋಗಲಾಂಬಾ ಗಡ್ವಾಲಾ ಜಿಲ್ಲೆಯ ಬೀಚುಪಲ್ಲಿಯ 10 ನೇ ಪೊಲೀಸ್ ಬೆಟಾಲಿಯನ್ ಬಳಿ ತಡರಾತ್ರಿ ಅಪಘಾತ ಸಂಭವಿಸಿದೆ. ಹೈದರಾಬಾದ್ನಿಂದ ಚಿತ್ತೂರಿಗೆ ತೆರಳುತ್ತಿದ್ದ ಖಾಸಗಿ ಟ್ರಾವೆಲ್ಸ್ ಬಸ್ ಪಲ್ಟಿಯಾಗಿದೆ. ಅಪಘಾತದಿಂದಾಗಿ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ. ಓರ್ವ ಮಹಿಳಾ ಸಜೀವ ದಹನವಾಗಿದ್ದಾರೆ.
ವರದಿಗಳ ಪ್ರಕಾರ, ಅಪಘಾತ ಸಂಭವಿಸಿದ ಬಸ್ನಲ್ಲಿ ಸುಮಾರು 40-50 ಪ್ರಯಾಣಿಕರಿದ್ದರು. ವೋಲ್ವೋ ಬಸ್ ಹೈದರಾಬಾದ್ ನಿಂದ ಚಿತ್ತೂರಿಗೆ ತೆರಳುತ್ತಿದ್ದಾಗ ಬೀಚುಪಲ್ಲಿ ಕೃಷ್ಣಾ ನದಿಯನ್ನು ದಾಟಿದೆ. ಅಲ್ಲಂಪುರ್ ಕ್ಷೇತ್ರದ ಇಟಿಕ್ಯಾಲ ಮಂಡಲದ 10 ನೇ ಬೆಟಾಲಿಯನ್ ಬಳಿ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಬಳಿಕ ಬಸ್ ಒಮ್ಮೆ ಬೆಂಕಿಗೆ ಆಹುತಿಯಾಯಿತು. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 30 ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.