ಬೆಂಗಳೂರು : ಬೆಂಗಳೂರಿನಲ್ಲಿ ಕಾಣೆಯಾಗಿದ್ದ ಎರಡೂವರೆ ವರ್ಷದ ಹೆಣ್ಣು ಮಗು ಸುರಕ್ಷಿತವಾಗಿ ಪತ್ತೆಯಾಗಿದೆ.
ವೈಯಾಲಿಕಾವಲ್ ನ ದೇವಯ್ಯ ಪಾರ್ಕ್ ಬಳಿ ಮಗು ನವ್ಯಾ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಮಗು ಪತ್ತೆಯಾದ ಬಳಿಕ ಪೋಷಕರು ಆತಂಕಗೊಂಡಿದ್ದರು. ಇದೀಗ ಎರಡೂವರೆ ವರ್ಷದ ಮಗು ನವ್ಯಾ ಮಿಸ್ಸಿಂಗ್ ಪ್ರಕರಣ ಸುಖಾಂತ್ಯಗೊಂಡಿದೆ.ವೈಯಾಲಿಕಾವಲ್ ನ ದೇವಯ್ಯ ಪಾರ್ಕ್ ಬಳಿ ಮಗು ನವ್ಯಾ ಪತ್ತೆಯಾಗಿದೆ.
ಮಹಿಳೆಯೊಬ್ಬರ ಜೊತೆ ಮಗು ಪತ್ತೆಯಾಗಿದೆ. ವೈಯಾಲಿಕಾವಲ್ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ. ಸುಜಾತಾ ಎಂಬ ಮಹಿಳೆ ಜೊತೆ ಮಗು ಹೋಗಿತ್ತು ಎನ್ನಲಾಗಿದೆ. ಆದರೆ ಯಾಕೆ ಮಗು ಮಹಿಳೆ ಜೊತೆ ಹೋಯಿತು ಎಂಬುದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.