ಅಮೆರಿಕ : ಗ್ವಾಟೆಮಾಲಾದ ರಾಜಧಾನಿಯ ಹೊರವಲಯದಲ್ಲಿ ಸೋಮವಾರ ಬಸ್ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಕನಿಷ್ಠ 55 ಜನರು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳದಲ್ಲಿ 53 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಆಸ್ಪತ್ರೆಗೆ ಕರೆತರಲಾದ ಇಬ್ಬರು ಪ್ರಯಾಣಿಕರು ಸಹ ಸಾವನ್ನಪ್ಪಿದ್ದಾರೆ ಎಂದು ಸ್ಯಾನ್ ಜುವಾನ್ ಡಿ ಡಿಯೋಸ್ ಆಸ್ಪತ್ರೆ ದೃಢಪಡಿಸಿದೆ ಎಂದು ಸಾರ್ವಜನಿಕ ಸಚಿವಾಲಯದ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ವಕ್ತಾರ ಎಡ್ವಿನ್ ವಿಲ್ಲಾಗ್ರಾನ್ ಮಾತನಾಡಿ, ಮುಂಜಾನೆ ಬಸ್ ಅನ್ನು ಕಡಿದಾದ ರಸ್ತೆಯಲ್ಲಿ ಕೆಳಗಿಳಿಸುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ ಎಂದು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.