ಢಾಕಾ: ಕಳೆದ ತಿಂಗಳು ನಾಗರಿಕ ಅಶಾಂತಿಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ನ್ಯಾಯಾಲಯವು ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಹಿಂದಿನ ಸರ್ಕಾರದ ಆರು ಉನ್ನತ ವ್ಯಕ್ತಿಗಳ ವಿರುದ್ಧ ಕೊಲೆ ತನಿಖೆಯನ್ನು ಪ್ರಾರಂಭಿಸಿದೆ.
ಬಾಂಗ್ಲಾದೇಶದ ಕಾನೂನಿನ ಅಡಿಯಲ್ಲಿ ಕ್ರಿಮಿನಲ್ ತನಿಖೆಯ ಮೊದಲ ಹೆಜ್ಜೆಯಾದ “ಆರೋಪಿಗಳ ವಿರುದ್ಧದ ಕೊಲೆ ಪ್ರಕರಣವನ್ನು” ಸ್ವೀಕರಿಸುವಂತೆ ಢಾಕಾದ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ ಎಂದು ಖಾಸಗಿ ನಾಗರಿಕರ ಪರವಾಗಿ ಪ್ರಕರಣವನ್ನು ತಂದ ವಕೀಲ ಮಾ ಮಾಮುನ್ ಮಿಯಾ ಹೇಳಿದರು.
ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಗಳು ಬಾಂಗ್ಲಾದೇಶವನ್ನು ಬೆಚ್ಚಿಬೀಳಿಸಿವೆ. ಮೀಸಲಾತಿ ವಿರುದ್ಧದ ಪ್ರತಿಭಟನೆಯಾಗಿ ಪ್ರಾರಂಭವಾದ ಪ್ರತಿಭಟನೆ ಕ್ರಮೇಣ ಆಗಿನ ದೇಶದ ಪ್ರಧಾನಿ ಶೇಖ್ ಹಸೀನಾ ವಿರುದ್ಧ ತಿರುಗಿತು. ಭೀಕರ ಹಿಂಸಾಚಾರದಲ್ಲಿ 300 ಕ್ಕೂ ಹೆಚ್ಚು ಜನ ಪ್ರಾಣ ತೆತ್ತಿದ್ದಾರೆ.