ಮುಂಬೈ : ಮಹಾರಾಷ್ಟ್ರದ ಪಾಲ್ಘರ್ನ ನಲಸೊಪರದ ಧನಿವ್ ಬಾಗ್ ಪ್ರದೇಶದ ಪಾರ್ಕಿಂಗ್ ಸ್ಥಳದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 7 ವಾಹನಗಳು ಸುಟ್ಟು ಬೂದಿಯಾಗಿವೆ.
ಪಾರ್ಕಿಂಗ್ ಸ್ಥಳದಲ್ಲಿ ರಾಸಾಯನಿಕಗಳನ್ನು ತುಂಬಿದ ಟ್ರಕ್ ಅನ್ನು ಸಹ ನಿಲ್ಲಿಸಲಾಗಿತ್ತು, ಅದು ಬೆಂಕಿಗೆ ಆಹುತಿಯಾಯಾಗಿದೆ. ಅಗ್ನಿಶಾಮಕ ದಳದ ತಂಡವು ತಕ್ಷಣ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಿಯಂತ್ರಿಸಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.