ಜಪಾನ್: ಪಶ್ಚಿಮ ಜಪಾನ್ ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ಸೋಮವಾರ ತಿಳಿಸಿದೆ.
ಇಶಿಕಾವಾ ಪ್ರಿಫೆಕ್ಚರ್ನ ನೊಟೊ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಜಪಾನ್ ಸಮುದ್ರದ ಕರಾವಳಿಯ ನಿಗಾಟಾ, ಟೊಯಾಮಾ, ಯಮಗಟಾ, ಫುಕುಯಿ ಮತ್ತು ಹ್ಯೋಗೊ ಪ್ರಾಂತ್ಯಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ನೀರಿನ ಪ್ರವಾಹವು 5 ಮೀಟರ್ ವರೆಗೆ ತಲುಪಬಹುದು ಎಂದು ಎಚ್ಚರಿಸಿದೆ ಮತ್ತು ಜನರು ಎತ್ತರದ ಪ್ರದೇಶಕ್ಕೆ ಅಥವಾ ಹತ್ತಿರದ ಕಟ್ಟಡದ ಮೇಲ್ಭಾಗಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ .ಭೂಕಂಪದ ಕೇಂದ್ರಬಿಂದುವಿನ 300 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುನಾಮಿ ಅಲೆಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಹವಾಮಾನ ಸಂಸ್ಥೆಗಳು ತಿಳಿಸಿವೆ. ಜಪಾನ್ ನ ಮುಖ್ಯ ದ್ವೀಪವಾದ ಹೊನ್ಶುವಿನ ಜಪಾನ್ ಸಮುದ್ರದ ಬದಿಯಲ್ಲಿರುವ ನೊಟೊ ಪ್ರದೇಶವು ಸ್ಥಳೀಯ ಸಮಯ ಸಂಜೆ 4:06 ಕ್ಕೆ 5.7 ತೀವ್ರತೆಯ ಭೂಕಂಪನದೊಂದಿಗೆ ಪ್ರಾರಂಭವಾಯಿತು ಎಂದು ಜೆಎಂಎ ತಿಳಿಸಿದೆ.
ಸಂಜೆ 4:10 ಕ್ಕೆ 7.6 ತೀವ್ರತೆಯ ಭೂಕಂಪ, ಸಂಜೆ 4:18 ಕ್ಕೆ 6.1 ತೀವ್ರತೆಯ ಭೂಕಂಪ, ಸಂಜೆ 4:23 ಕ್ಕೆ 4.5 ತೀವ್ರತೆಯ ಭೂಕಂಪ, ಸಂಜೆ 4:29 ಕ್ಕೆ 4.6 ತೀವ್ರತೆಯ ಭೂಕಂಪ ಮತ್ತು ಸಂಜೆ 4:32 ಕ್ಕೆ 4.8 ತೀವ್ರತೆಯ ಭೂಕಂಪ ಸಂಭವಿಸಿದೆ. ಶೀಘ್ರದಲ್ಲೇ 6.2 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.