ಡಿಜಿಟಲ್ ಡೆಸ್ಕ್ : ಚಿಲಿಯ ಅಂಟೊಫಗಸ್ಟಾದಲ್ಲಿ ಗುರುವಾರ 7.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಕರಾವಳಿ ನಗರ ಅಂಟೊಫಗಸ್ತಾದಿಂದ ಪೂರ್ವಕ್ಕೆ 265 ಕಿಲೋಮೀಟರ್ ದೂರದಲ್ಲಿ 128 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ಜಿಎಸ್ ತಿಳಿಸಿದೆ.ಸ್ಥಳೀಯ ಕಾಲಮಾನ ರಾತ್ರಿ 9:51 ಕ್ಕೆ ಭೂಕಂಪ ಸಂಭವಿಸಿದ್ದು, ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ.ಇಲ್ಲಿಯವರೆಗೆ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ.
ಜನವರಿಯಲ್ಲಿ ಚಿಲಿಯ ಉತ್ತರ ಪ್ರದೇಶವಾದ ತಾರಾಪಾಕಾದಲ್ಲಿ 118 ಕಿ.ಮೀ ಆಳದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆ ಸಮಯದಲ್ಲಿ ಯಾವುದೇ ನಷ್ಟದ ಬಗ್ಗೆ ವರದಿಯಾಗಿಲ್ಲ.ಚಿಲಿ ವಿಶ್ವದ ಅತ್ಯಂತ ಭೂಕಂಪ ಪೀಡಿತ ದೇಶಗಳಲ್ಲಿ ಒಂದಾಗಿದೆ.