alex Certify BREAKING : ಶರಣಾದ 6 ಮಂದಿ ನಕ್ಸಲರಿಗೆ ತಲಾ 3. ಲಕ್ಷ ರೂ ಪ್ರೋತ್ಸಾಹಧನ ಮಂಜೂರು : ರಾಜ್ಯ ಸರ್ಕಾರ ಅಧಿಕೃತ ಆದೇಶ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಶರಣಾದ 6 ಮಂದಿ ನಕ್ಸಲರಿಗೆ ತಲಾ 3. ಲಕ್ಷ ರೂ ಪ್ರೋತ್ಸಾಹಧನ ಮಂಜೂರು : ರಾಜ್ಯ ಸರ್ಕಾರ ಅಧಿಕೃತ ಆದೇಶ.!

ಬೆಂಗಳೂರು : ಶರಣಾದ ಆರು ಮಂದಿ ನಕ್ಸಲರಿಗೆ ತಲಾ ಮೂರು ಲಕ್ಷ ರೂ ಪ್ರೋತ್ಸಾಹಧನ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಏನಿದೆ ಆದೇಶದಲ್ಲಿ..?

ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್ ವಸತಿ ಯೋಜನೆಯಡಿಯಲ್ಲಿ ನಕ್ಸಲ್ ಚಟುವಟಿಕೆಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಶರಣಾಗತರಾದವರನ್ನು ಸರ್ಕಾರದಿಂದ ಘೋಷಣೆಯಾಗಿರುವ ಸೌಲಭ್ಯಗಳನ್ನು ಒದಗಿಸಲು ಉಲ್ಲೇಖ(1) ರ ಸರ್ಕಾರದ ಅದೇಶದಲ್ಲಿ ನಿರ್ದೇಶಿಸಲಾಗಿರುತ್ತದೆ.
ದಿನಾಂಕ:6-01-2025 ರಂದು ರಾಜ್ಯದ ಭೂಗತ ನಕ್ಸಲರಾದ 1)ಮುಂಡಗಾರು ಲತಾ 2) ಸುಂದರಿ ಕುತ್ತಲೂರು 3)ವನಜಾಕ್ಷಿ ಬಾಳೆಹೊಳೆ 4) ಮಾರೆಪ್ಪ, ಆರೋಟಿ 5) ಕೆ.ವಸಂತ 6) ಟಿ.ಎನ್.ಜಿಷಾ ಇವರುಗಳು ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್ ವಸತಿ ಯೋಜನೆಯ ರಾಜ್ಯ ಮಟ್ಟದ ನಕ್ಸಲ್ ಶರಣಾಗತ ಸಮಿತಿಯ ಮುಂದೆ ಮುಖ್ಯವಾಹಿನಿಗೆ ಶರಣಾಗತರಾಗಿರುತ್ತಾರೆ. ಅದರಂತೆ ಇವರುಗಳ ಶರಣಾಗತ ಅರ್ಜಿಯನ್ನು ಅನುಮೋದಿಸಿ ಅಂಗೀಕರಿಸಲು ಹಾಗೂ ಪ್ರವರ್ಗ “ಎ” ಅಡಿಯಲ್ಲಿನ ಶರಣಾಗತರಾಗಲು ಒಪ್ಪಿರುವ ನಕ್ಸಲರಿಗೆ ರೂ.3.00 ಲಕ್ಷಗಳನ್ನು ಹಾಗೂ ಪ್ರವರ್ಗ “ಬಿ” ಅಡಿಯಲ್ಲಿನ ಶರಣಾಗತರಿಗೆ ರೂ.3.00 ಲಕ್ಷಗಳನ್ನು ಸರ್ಕಾರದ ವತಿಯಿಂದ ನೀಡಲು ರಾಜ್ಯ ಸಮಿತಿಯಲ್ಲಿ ತೀರ್ಮಾನಿಸಲಾಗಿರುತ್ತದೆ.

ಮುಂದುವರೆದು 1)ಮುಂಡಗಾರು ಲತಾ 2) ಸುಂದರಿ ಕುತ್ತಲೂರು 3)ವನಜಾಕ್ಷಿ ಬಾಳೆಹೊಳೆ 4) ಮಾರಪ್ಪಆರೋಟಿ 5) ಕೆ.ವಸಂತ 6) ಟಿ.ಎನ್.ಜಿಷಾ ಇವರುಗಳ ಔಪಚಾರಿಕ ಶರಣಾಗತಿಯನ್ನು ಅಂಗೀಕರಿಸಿ ಆದೇಶ ಹೊರಡಿಸಲು ಚಿಕ್ಕಮಗಳೂರು ಜಿಲ್ಲಾ ಸಮಿತಿಗೆ ತಿಳಿಸಲು ತೀರ್ಮಾನಿ ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ಶರಣಾಗತಿ/ ಪುನರ್ ವಸತಿ ಸಮಿತಿಯು ಮುಂದಿನ ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶಿಸಲಾಗಿರುತ್ತದೆ.

ಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್ ವಸತಿಯ ಜಿಲ್ಲಾ ಸಮಿತಿ ಸಭೆಯನ್ನು ನಡೆಸಲಾಗಿದ್ದು ಸದರಿ ಸಭೆಯಲ್ಲಿ ಸರ್ಕಾರದ ನಿರ್ದೇಶನದಂತೆ ಕ್ರಮವಹಿಸುವುದು ಅಗತ್ಯವಾಗಿರುತ್ತದೆಂದು ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ.ಆದ್ದರಿಂದ ಉಲ್ಲೇಖ (1) ರ ಸರ್ಕಾರದ ಯೋಜನೆಯಂತೆ ಹಾಗೂ ಉಲ್ಲೇಖ (2) ರ ನಿರ್ದೇಶನದಂತೆ ಈ ಕೆಳಕಂಡ ಶರಣಾಗತರಿಗೆ ಮೊದಲನೆ ಹಂತದಲ್ಲಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಜಮೆಯಾಗಿ ಬಾಕಿ ಉಳಿದಿರುವ ಪರಿಹಾರ ನಿಧಿಯಿಂದ ಈ ಕೆಳಕಂಡಂತೆ ಪ್ರೋತ್ಸಾಹಧನವನ್ನು ಮಂಜೂರು ಮಾಡಿ ಆದೇಶಿಸಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...