ಈಜಿಪ್ಟ್’ನ ಕೆಂಪು ಸಮುದ್ರದ ನಗರ ಹುರ್ಘಾಡಾದಲ್ಲಿ ಗುರುವಾರ ಪ್ರವಾಸಿ ಜಲಾಂತರ್ಗಾಮಿ ನೌಕೆ ಮುಳುಗಿದ ಪರಿಣಾಮ ಕನಿಷ್ಠ ಆರು ವಿದೇಶಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಬಲಿಯಾದವರ ಗುರತು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಅದು ಹೇಳಿದೆ.
ವಿವಿಧ ರಾಷ್ಟ್ರಗಳ ಒಟ್ಟು 45 ಪ್ರಯಾಣಿಕರೊಂದಿಗೆ ಜಲಾಂತರ್ಗಾಮಿ ನೌಕೆಯು ಕೆಂಪು ಸಮುದ್ರದ ಜನಪ್ರಿಯ ಕಡಲತೀರದ ತಾಣವಾದ ಹುರ್ಘಾಡಾದಿಂದ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕೆಂಪು ಸಮುದ್ರದ ಗವರ್ನರೇಟ್ ಪ್ರಕಾರ, ತುರ್ತು ರಕ್ಷಣಾ ಸಿಬ್ಬಂದಿ 29 ಜನರನ್ನು ರಕ್ಷಿಸಿದ್ದಾರೆ.