ಬ್ರೆಜಿಲ್ : ಬ್ರೆಜಿಲ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ ದೃಢಪಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ (ಜಿಎಫ್ಜೆಡ್), ಪಶ್ಚಿಮ ಬ್ರೆಜಿಲ್ ನಲ್ಲಿ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪನವು ಶನಿವಾರ (ಸ್ಥಳೀಯ ಸಮಯ) ಸಂಭವಿಸಿದೆ ಎಂದು ತಿಳಿಸಿದೆ. ಭೂಕಂಪವು 592 ಕಿಲೋಮೀಟರ್ (368 ಮೈಲಿ) ಆಳದಲ್ಲಿತ್ತು ಎಂದು ಜಿಎಫ್ಜೆಡ್ ತಿಳಿಸಿದೆ.