ಟೋಕಿಯೊದ ದಕ್ಷಿಣಕ್ಕಿರುವ ಪೆಸಿಫಿಕ್ ಮಹಾಸಾಗರದ ಒಗಸಾವರ ದ್ವೀಪಗಳ ಬಳಿ ಮಂಗಳವಾರ 6.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಎಂದು ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ತಿಳಿಸಿದೆ.
ಸ್ಥಳೀಯ ಕಾಲಮಾನ ಬೆಳಿಗ್ಗೆ 9:39 ರ ಸುಮಾರಿಗೆ ಸುಮಾರು 50 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಹಹಾಜಿಮಾ ದ್ವೀಪದಲ್ಲಿ ಜಪಾನಿನ ಭೂಕಂಪನ ತೀವ್ರತೆಯ ಮಾಪಕದಲ್ಲಿ 4 ರಷ್ಟಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ತಕ್ಷಣದ ವರದಿಗಳಿಲ್ಲ.