ನವದೆಹಲಿ: ಪಾಕಿಸ್ತಾನದಲ್ಲಿ ಗುರುವಾರ 5.8 ತೀವ್ರತೆಯ ಭೂಕಂಪನ ಸಂಭವಿಸಿದ ನಂತರ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ಲಘು ಭೂಕಂಪನದ ಅನುಭವವಾಗಿದೆ. ಇಸ್ಲಾಮಾಬಾದ್ ಮತ್ತು ಲಾಹೋರ್ ನಲ್ಲೂ ಭೂಕಂಪದ ಅನುಭವವಾಗಿದೆ.
ಭೂಕಂಪದ ಕೇಂದ್ರ ಬಿಂದು ಪಾಕಿಸ್ತಾನದ ಕರೋರ್ನಿಂದ ನೈಋತ್ಯಕ್ಕೆ 25 ಕಿ.ಮೀ ದೂರದಲ್ಲಿತ್ತು. ಭೂಕಂಪದ ಆಳ 10 ಕಿ.ಮೀ.ಇದು ಸಾಕಷ್ಟು ಆಘಾತವನ್ನುಂಟುಮಾಡಿತು.