ಬೀಜಿಂಗ್ : ಚೀನಾದಲ್ಲಿ ಮತ್ತೊಮ್ಮೆ ಪ್ರಬಲ ಭೂಕಂಪನದ ಅನುಭವವಾಗಿದೆ. ವಾಯುವ್ಯ ಕ್ಸಿನ್ಜಿಯಾಂಗ್ ಪ್ರದೇಶದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವನ್ನು ಚೀನಾ ಭೂಕಂಪ ಜಾಲ ಕೇಂದ್ರ (ಸಿಇಎನ್ಸಿ) ವರದಿ ಮಾಡಿದೆ.
ಕೆಲವು ಗಂಟೆಗಳ ಹಿಂದೆ, ಚೀನಾದ ಗನ್ಸು ಮತ್ತು ಕ್ವಿಂಗೈ ಪ್ರಾಂತ್ಯದಲ್ಲಿ 6.2 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದ್ದು, ಕನಿಷ್ಠ 111 ಜನರು ಸಾವನ್ನಪ್ಪಿದ್ದಾರೆ. ಚೀನಾದ ಗನ್ಸುವಿನಲ್ಲಿ 4700 ಮನೆಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದ ಕೇಂದ್ರ ಬಿಂದು 10 ಕಿಲೋಮೀಟರ್ ಆಳದಲ್ಲಿತ್ತು ಎಂದು ಸಿಸಿಟಿವಿ ನ್ಯೂಸ್ ತಿಳಿಸಿದೆ. ಇದಲ್ಲದೆ, ಈ ಪ್ರದೇಶದಲ್ಲಿ ನೀರು, ವಿದ್ಯುತ್, ಸಾರಿಗೆ ಸೇವೆಗಳು ಸ್ಥಗಿತಗೊಂಡಿವೆ ಎಂದು ಚೀನಾದ ಸುದ್ದಿ ಚಾನೆಲ್ ವರದಿ ಮಾಡಿದೆ.