ಮಾಲ್ಡೀವ್ಸ್ : ಮಾಲ್ಡೀವ್ಸ್ ನಲ್ಲಿ ನಿನ್ನೆ ಸಂಜೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಸಂಜೆ 5:16 ಕ್ಕೆ ಭೂಕಂಪನದ ಅನುಭವವಾಗಿದೆ. ಭೂಕಂಪದ ಸ್ಥಳವು ಮಾಲೆಯಿಂದ ಪಶ್ಚಿಮಕ್ಕೆ 896 ಕಿಲೋಮೀಟರ್ ದೂರದಲ್ಲಿದೆ ಎಂದು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ.
5.4 ತೀವ್ರತೆಯ ಭೂಕಂಪವು 06-01-2024, 17:16:34 ಭಾರತೀಯ ಕಾಲಮಾನ, ಲಾಟ್: 3.06 ಮತ್ತು ಉದ್ದ: 65.51, ಆಳ: 10 ಕಿ.ಮೀ, ಸ್ಥಳ: 896 ಕಿ.ಮೀ ಮಾಲೆ” ಎಂದು ಎನ್ಸಿಎಸ್ ತಿಳಿಸಿದೆ.