ಕಠ್ಮಂಡು: ಇಡೀ ದೇಶ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳುಗಿರುವಾಗ, ನೇಪಾಳದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ನೇಪಾಳದಲ್ಲಿ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3 ರಷ್ಟಿತ್ತು.
ಹೊಸ ವರ್ಷವನ್ನು ಆಚರಿಸಲು ಅನೇಕ ಸ್ಥಳಗಳಲ್ಲಿ ಜನರು ಜಮಾಯಿಸಿದ್ದ ವೇಳೆ ತಡರಾತ್ರಿ ಭೂಕಂಪ ಸಂಭವಿಸಿದ್ದು, ಹೊಸ ವರ್ಷವನ್ನು ಆಚರಿಸುತ್ತಿರುವ ಜನರು ಭೂಕಂಪನದ ಅನುಭವವಾದ ಕೂಡಲೇ ಆಘಾತಕ್ಕೊಳಗಾಗಿದ್ದಾರೆ.
ನೇಪಾಳದಲ್ಲಿ 2023 ವರ್ಷವು ಭೂಕಂಪದಂತಹ ದುರಂತದೊಂದಿಗೆ ಪ್ರಾರಂಭವಾಯಿತು. ಈ ವರ್ಷ ನೇಪಾಳದಲ್ಲಿ ಹಲವು ಬಾರಿ ಭೂಕಂಪ ಸಂಭವಿಸಿತ್ತು. ಈ ವರ್ಷ, ಜನವರಿ 24 ರಂದು 5.9 ತೀವ್ರತೆಯ ಭೂಕಂಪ, ಫೆಬ್ರವರಿ 22 ರಂದು 5.2 ಮತ್ತು ಅಕ್ಟೋಬರ್ 22 ರಂದು 6.1 ತೀವ್ರತೆಯ ಭೂಕಂಪ ಸೇರಿದಂತೆ ಹಲವು ಬಾರಿ 5.0 ತೀವ್ರತೆಯ ಭೂಕಂಪಗಳು ಇಲ್ಲಿ ದಾಖಲಾಗಿವೆ.