ಗಾಝಾ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 27 ಹಮಾಸ್ ಉಗ್ರರು ಸಾವನ್ನಪ್ಪಿದ್ದಾರೆ, ಈ ಕಾಂಪೌಂಡ್ ಹಮಾಸ್ ಉಗ್ರರನ್ನು ಇರಿಸಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ ಎಂದು ವರದಿ ತಿಳಿಸಿದೆ.
ಮಧ್ಯ ಗಾಝಾದ ನುಸಿರಾತ್ನಲ್ಲಿರುವ ವಿಶ್ವಸಂಸ್ಥೆಯ ಶಾಲೆಯಲ್ಲಿ ಹಮಾಸ್ ನ ಗುಪ್ತ ಕಮಾಂಡ್ ಪೋಸ್ಟ್ ಇದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಗಾಝಾ ಶಾಲೆಯಲ್ಲಿ ಹಮಾಸ್ ಉಗ್ರರು ಅಡಗಿಕೊಂಡಿದ್ದರು ಎಂದು ಮೂಲಗಳು ತಿಳಿಸಿದೆ. 20023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಹಮಾಸ್ ಹೋರಾಟಗಾರರಿಗೆ ಈ ಕಾಂಪೌಂಡ್ ಆಶ್ರಯ ನೀಡಿತ್ತು.
ಫೈಟರ್ ಜೆಟ್ ಗಳ ದಾಳಿಯ ಮೊದಲು, ನಾಗರಿಕರ ಸಾವುನೋವುಗಳನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.