
ದುಬೈ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 241 ರನ್ ಗೆ ಆಲೌಟ್ ಆಗಿದ್ದು, ಭಾರತಕ್ಕೆ 242 ರನ್ ಗೆಲುವಿನ ಗುರಿ ನೀಡಿದೆ.
ಪಾಕಿಸ್ತಾನ ಪರವಾಗಿ ಇಮಾಮ್ ಉಲ್ ಹಕ್ 10, ಬಾಬರ್ ಆಜಮ್ 23, ಸೌದ್ ಶಕೀಲ್ 62, ಮಹಮ್ಮದ್ ರಿಜ್ವಾನ್ 46, ಸಲ್ಮಾನ್ ಆಘಾ 19, ತಯಾಬ್ ತಾಹಿರ್ 4, ಕುಶ್ ದಿಲ್ ಶಹಾ 38, ಶಾಹಿನ್ ಆಫ್ರಿದಿ 0, ನಾಸಿಂ ಶಹಾ 14, ಹ್ಯಾರಿಸ್ ರವೂಫ್ 8 ರನ್ ಗಳಿಸಿದ್ದಾರೆ. 49.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 241 ರನ್ ಗಳಿಸಿದೆ.
ಭಾರತದ ಪರವಾಗಿ ಹಾರ್ದಿಕ್ ಪಾಂಡ್ಯ 2, ಕುಲದೀಪ್ ಯಾದವ್ 3, ಹರ್ಷಿತ್ ರಾಣಾ 1, ಅಕ್ಷರ್ ಪಟೇಲ್ 1, ರವೀಂದ್ರ ಜಡೇಜ 1 ವಿಕೆಟ್ ಪಡೆದಿದ್ದಾರೆ.
#ICCChampionsTrophy | India needs 242 runs to win against Pakistan at Dubai International Cricket Stadium pic.twitter.com/gW5k1ZBNSy
— ANI (@ANI) February 23, 2025