ಸೂರತ್ ನಲ್ಲಿ ಮ್ಯಾನ್ ಹೋಲ್ ಗೆ ಎರಡು ವರ್ಷದ ಬಾಲಕ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.ಎರಡು ವರ್ಷದ ಬಾಲಕ ಮ್ಯಾನ್ ಹೋಲ್ ಗೆ ಬಿದ್ದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಜಿಲ್ಲೆಯ ವೈರವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಹಿತಿ ಪಡೆದ ನಂತರ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ತಂಡವು ಸ್ಥಳಕ್ಕೆ ತಲುಪಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
“ಭಾರಿ ವಾಹನದಿಂದ ಮ್ಯಾನ್ ಹೋಲ್ ಚೇಂಬರ್ ನ ಮುಚ್ಚಳಕ್ಕೆ ಹಾನಿಯಾಗಿದೆ. 2 ವರ್ಷದ ಬಾಲಕ ಅದರಲ್ಲಿ ಬಿದ್ದಿದ್ದಾನೆ. ನಾವು ಸುಮಾರು 100-150 ಮೀಟರ್ ಪ್ರದೇಶವನ್ನು ಪರಿಶೀಲಿಸಿದ್ದೇವೆ” ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸಂತ್ ಪಾರಿಖ್ ಹೇಳಿದ್ದಾರೆ.
“ಮಗುವನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ… ಇಲ್ಲಿ 60-70 ಕಾರ್ಮಿಕರನ್ನು ನಿಯೋಜಿಸಲಾಗಿದೆ” ಎಂದು ಅವರು ಹೇಳಿದರು. ಮಗುವನ್ನು ರಕ್ಷಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.