ಬೆಂಗಳೂರು : ಶಾಸಕ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಎರಡು ಎಫ್ ಐ ಆರ್ (FIR) ದಾಖಲಾಗಿದೆ.
ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದ ಹಿನ್ನೆಲೆ ಚೆಲುವರಾಜು ನೀಡಿರುವ ದೂರಿನ ಮೇರೆಗೆ ಶಾಸಕ ಮುನಿರತ್ನ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಜೀವ ಬೆದರಿಕೆ ಹಾಕಿದ್ದ ಒಂದು ಪ್ರಕರಣ ದಾಖಲಾಗಿದ್ದು,ಜಾತಿ ನಿಂದನೆ ಮಾಡಿದ ಆರೋಪದಡಿಯಲ್ಲಿ ಮತ್ತೋಂದು ಕೇಸ್ ದಾಖಲಾಗಿದೆ.ಈ ಮೊದಲ ಜೀವ ಬೆದರಿಕೆ ಪ್ರಕರಣದಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದರಲ್ಲಿ A-1 ಮುನಿರತ್ನ ಮಾಜಿ ಸಚಿವ A-2- ವಿ ಜಿ ಕುಮರ್, ಆಪ್ತ ಸಹಾಯಕ, A-3 ಅಭಿಷೇಕ್ ಸೆಕ್ಯೂರಿಟಿ,A-4 ವಸಂತ್ ಕುಮಾರ್ ಆಗಿದ್ದಾರೆ. ಮತ್ತೋಂದು ಪ್ರಕರಣದಲ್ಲಿ ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿದೆ.