ಮೆಕ್ಸಿಕೊ : ಮೆಕ್ಸಿಕೊದ ವಾಯುವ್ಯ ಸಿನಾಲೊವಾ ರಾಜ್ಯದಲ್ಲಿ ಮಂಗಳವಾರ ಮುಂಜಾನೆ ಟ್ರಕ್ ಮತ್ತು ಪ್ರಯಾಣಿಕರಿಂದ ತುಂಬಿದ ಬಸ್ ನಡುವೆ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ ಎನ್ + ತಿಳಿಸಿದೆ.
ಮಜಟ್ಲಾನ್ ಮತ್ತು ಲಾಸ್ ಮೊಚಿಸ್ ಅನ್ನು ಸಂಪರ್ಕಿಸುವ ಕರಾವಳಿ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ನಂತರ ಸ್ಥಳದಲ್ಲೇ ಬಸ್ ಹೊತ್ತಿ ಉರಿದಿದ್ದು, ಸ್ಥಳಕ್ಕೆ ತುರ್ತು ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.