ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 31,443 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಮೂಲಕ 118 ದಿನಗಳ ಬಳಿಕ ಭಾರತವು ಕೊರೊನಾ ಪ್ರಕರಣ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ನಿಜಕ್ಕೂ ಒಂದು ಒಳ್ಳೆಯ ಬೆಳವಣಿಗೆಯಾಗಿದೆ. ಆತಂಕದ ಸಂಗತಿಯೆಂದರೆ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ.
ದೇಶದಲ್ಲಿ ಪ್ರಸ್ತುತ 4,31,315 ಸಕ್ರಿಯ ಪ್ರಕರಣಗಳಿದ್ದು ರಿಕವರಿ ರೇಟ್ 97.82 ಪ್ರತಿಶತಕ್ಕೆ ಏರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ಒಟ್ಟು 17,40,325 ಸ್ಯಾಂಪಲ್ಗಳನ್ನ ಪರೀಕ್ಷೆ ಮಾಡಲಾಗಿದ್ದು ಈ ಮೂಲಕ ದೇಶದಲ್ಲಿ ಒಟ್ಟು 43,40,58,138 ಸ್ಯಾಂಪಲ್ಗಳ ಪರೀಕ್ಷೆ ಮಾಡಿದಂತಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2020 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಹಾಗೂ 1 ದಿನದಲ್ಲಿ 49,007 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಚೇತರಿಕೆ ಕಂಡವರ ಸಂಖ್ಯೆ 3,00,63,720ಕ್ಕೆ ಏರಿಕೆಯಾಗಿದೆ. .ದೇಶದಲ್ಲಿ ಪ್ರಸ್ತುತ 4,31,315 ಸಕ್ರಿಯ ಪ್ರಕರಣಗಳಿದ್ದು ರಿಕವರಿ ರೇಟ್ 97.82 ಪ್ರತಿಶತಕ್ಕೆ ಏರಿಕೆ ಕಂಡಿದೆ.
ಕಳೆದ 24 ಗಂಟೆಯಲ್ಲಿ ಒಟ್ಟು 17,40,325 ಸ್ಯಾಂಪಲ್ಗಳನ್ನ ಪರೀಕ್ಷೆ ಮಾಡಲಾಗಿದ್ದು ಈ ಮೂಲಕ ದೇಶದಲ್ಲಿ ಒಟ್ಟು 43,40,58,138 ಸ್ಯಾಂಪಲ್ಗಳ ಪರೀಕ್ಷೆ ಮಾಡಿದಂತಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 40,65,862 ಮಂದಿಗೆ ಲಸಿಕೆಯನ್ನ ನೀಡಲಾಗಿದ್ದು ಒಟ್ಟು ಲಸಿಕೆ ಪಡೆದವರ ಸಂಖ್ಯೆ 38,14,67,646ಕ್ಕೆ ಏರಿಕೆಯಾದಂತಾಗಿದೆ.
ಕೋವಿಡ್ ಕೇಸ್ ಹೆಚ್ಚಳ ಹಿನ್ನಲೆಯಲ್ಲಿ ಇಂದು ಪಿಎಂ. ಸಭೆ: ದೇಶದಾದ್ಯಂತ ಕೊರೊನಾ ಎರಡನೇ ಅಲೆ ಅಬ್ಬರ ಕಡಿಮೆಯಾಗುತ್ತಿರುವ ಮಧ್ಯೆ ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಎಂಟು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಅರುಣಾಚಲ ಪ್ರದೇಶದ 10 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. 10 ಇದ್ದರೆ ಅದೇ ರೀತಿ ಮಣಿಪುರದ 9, ಮೇಘಾಲಯದ 6, ಅಸ್ಸಾಂ ಮತ್ತು ಸಿಕ್ಕಿಂ ತಲಾ 4, ತ್ರಿಪುರಾದ 3, ಮಿಜೋರಾಂನ 2 ಮತ್ತು ನಾಗಾಲ್ಯಾಂಡ್ ನ 1 ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.10 ಕ್ಕಿಂತ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಎಂಟು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಮಹತ್ವದ ಸಭೆ ನಡೆಯಲಿದೆ.
ಕೊರೊನಾ ಮೂರನೇ ಅಲೆ ಶೀಘ್ರದಲ್ಲೇ ಭಾರತದಲ್ಲಿ ಆರಂಭವಾಗಲಿದೆ ಎಂದು ಐಸಿಎಂಆರ್ ಎಚ್ಚರಿಕೆ ನೀಡಿರುವ ಮಧ್ಯೆ ಹೈದರಾಬಾದ್ ಮೂಲದ ತಜ್ಞ ಡಾ. ವಿಪಿನ್ ಶ್ರೀವಾಸ್ತವ, ಕೊರೊನಾ ಮೂರನೇ ಅಲೆ ಜುಲೈ 4 ರಿಂದಲೇ ಆರಂಭವಾಗಿದೆ ಎಂಬ ಆಘಾತಕಾರಿ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಅವರು ಕೊರೊನಾ ಸೋಂಕಿನ ಪ್ರಮಾಣ ಹಾಗೂ ಸಾವಿನ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡಿದ್ದು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಇದನ್ನು ನಿಯಂತ್ರಿಸಬಹುದಾಗಿದೆ ಎಂದು ಹೇಳಿದ್ದಾರೆ.
ವಿಶ್ವದಲ್ಲಿ ಕೊರೊನಾ ಹೆಚ್ಚಳವಾಗಲು ಮಾಲಿನ್ಯವೂ ಪ್ರಮುಖ ಕಾರಣವಾಗಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ಅಲ್ಲದೇ ಕೊರೊನಾ ಮೂಲ ವೈರಸ್ ಗಿಂತಲೂ ರೂಪಾಂತರಿ ತಳಿ ಬೀಟಾ ಹೆಚ್ಚು ಅಪಾಯಕಾರಿ ಎಂದು ಹೇಳಿದೆ.
ತಜ್ಞರು ಕೊರೊನಾ ಮೂರನೇ ಅಲೆ ಕುರಿತು ಎಚ್ಚರಿಕೆ ನೀಡುತ್ತಿರುವ ಮಧ್ಯೆಯೂ ಸಾರ್ವಜನಿಕರು ಮೈಮರೆತು ಕೊರೊನಾ ನಿರ್ಬಂಧಗಳನ್ನು ಪಾಲಿಸದಿರುವುದು ಆತಂಕಕ್ಕೆ ಕಾರಣವಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವ ಕುರಿತು ಪದೇ ಪದೇ ಸೂಚನೆ ಗಳನ್ನು ನೀಡಿದರೂ ಸಹ ಜನ ಅದನ್ನು ನಿರ್ಲಕ್ಷಿಸುತ್ತಿದ್ದಾರೆ. ಅದರಲ್ಲೂ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಮುಗಿಬೀಳುತ್ತಿರುವುದು ಅಲ್ಲಿನ ಜನತೆಯನ್ನು ಚಿಂತೆಗೀಡು ಮಾಡಿದೆ. ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಅಲ್ಲಿನ ನಿವಾಸಿಗಳಿಂದ ಕೇಳಿಬಂದಿದೆ.
ಒಡಿಶಾದಲ್ಲಿ ಕಳೆದ 24 ಗಂಟೆಯಲ್ಲಿ 1,930 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 68 ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರ 2,937 ಮಂದಿ ಗುಣಮುಖರಾಗಿದ್ದು, ಒಡಿಶಾದಲ್ಲಿ ಒಟ್ಟು 23,492 ಸಕ್ರಿಯ ಸೋಂಕಿನ ಪ್ರಕರಣಗಳಿವೆ.