ಹುಬ್ಬಳ್ಳಿ : ನರ್ಸ್ ಗಳ ಮೇಲೆ ಅವಹೇಳನಕಾರಿಯಾಗಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಕ್ಕಾಗಿ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯೊಂದರ 11 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.
ಕಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳು ನರ್ಸ್ ಗಳನ್ನು ಗುರಿಯಾಗಿಸಿಕೊಂಡು ಚಲನಚಿತ್ರದ ಹಾಡುಗಳಿಗೆ ರೀಲ್ಸ್ ಮಾಡುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೀಲ್ಸ್ ವಿಡಿಯೋಗಳನ್ನು ಇನ್ ಸ್ಟಾಗ್ರಾಂ ನಲ್ಲಿ ಹಾಕಿದ್ದು, ವಿದ್ಯಾರ್ಥಿಗಳ ಹುಚ್ಚಾಟಕ್ಕೆ ಕರ್ನಾಟಕ ರಾಜ್ಯ ನರ್ಸ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿತ್ತು.ಇದರ ಬೆನ್ನಲ್ಲೇ 11 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.
`ನಂಬಬೇಡ ನಂಬಬೇಡ ಹುಡುಗಿಯರನ್ನು ನಂಬ ಬೇಡ’ ಎಂಬ ಹಾಡಿನ ಸಾಲಿಗೆ ‘ನಂಬಬೇಡ, ನಂಬಬೆಡ ನರ್ಸ್ ಗಳನ್ನು ನಂಬಬೇಡ’ ಎಂದು ಹಾಡಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಮಹೇಶ್ ರೆಡ್ಡಿ ಎಂಬಾತನ ಅಕೌಂಟ್ ನಿಂದ ಪೋಸ್ಟ್ ಆಗಿದೆ. ಸಧ್ಯ ವಿಡಿಯೋ ಭಾರಿ ವೈರಲ್ ಆಗಿದ್ದು, ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನರ್ಸ್ ಅಸೋಷಿಯೇಷನ್ ಹಾಗೂ ಧಾರವಾಡ ಜಿಲ್ಲಾ ಶುಶ್ರೂಷಕರ ಸಂಘ ಒತ್ತಾಯಿಸಿತ್ತು.