ಕ್ವೆಟ್ಟಾ: ಕ್ವೆಟ್ಟಾದಿಂದ 50 ಕಿ.ಮೀ ದೂರದಲ್ಲಿರುವ ಸಂಜ್ಡಿ ಪ್ರದೇಶದ ಕಲ್ಲಿದ್ದಲು ಗಣಿಯೊಳಗೆ ಮೀಥೇನ್ ಗ್ಯಾಸ್ ಸ್ಪೋಟಗೊಂಡ ಪರಿಣಾಮ ಉಸಿರುಗಟ್ಟಿ ಕನಿಷ್ಠ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿದೆ.
ಸೋಮವಾರ ನಡೆದ ಈ ಘಟನೆಯಲ್ಲಿ ಒಂಬತ್ತು ಕಲ್ಲಿದ್ದಲು ಗಣಿ ಕಾರ್ಮಿಕರು, ಕಲ್ಲಿದ್ದಲು ಕಂಪನಿ ವ್ಯವಸ್ಥಾಪಕ ಮತ್ತು ಗುತ್ತಿಗೆದಾರ ಸಾವನ್ನಪ್ಪಿದ್ದಾರೆ.
ಕಾರ್ಮಿಕರು ಗಣಿಯಲ್ಲಿ ಸುಮಾರು 1,500 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದಾಗ ಅನಿಲ ಸ್ಫೋಟಗೊಂಡಿದ್ದು, ಎಲ್ಲಾ ಗಣಿ ಕಾರ್ಮಿಕರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಗಣಿ ಇಲಾಖೆಯ ರಕ್ಷಣಾ ಸಿಬ್ಬಂದಿ ಘಟನೆಯ ಸ್ಥಳಕ್ಕೆ ಧಾವಿಸಿದರು. “ಎಲ್ಲಾ ಒಂಬತ್ತು ಗಣಿ ಕಾರ್ಮಿಕರು ಮತ್ತು ಇತರ ಇಬ್ಬರು ಗಣಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ” ಎಂದು ಅಧಿಕಾರಿ ಹೇಳಿದರು.