ಸೌಮ್ಯ ಹಾಗೂ ಲಕ್ಷಣ ರಹಿತ ಕೋವಿಡ್ ಸೋಂಕು ಹೊಂದಿರುವ ರೋಗಿಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯು ಪರಿಷ್ಕೃತ ಮಾರ್ಗಸೂಚಿಯನ್ನು ಇಂದು ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿಯ ಪ್ರಕಾರ ಹೋಂ ಐಸೋಲೇಷನ್ನಲ್ಲಿರುವ ಸೌಮ್ಯ ಲಕ್ಷಣ ಅಥವಾ ಲಕ್ಷಣ ರಹಿತ ಸೋಂಕನ್ನು ಹೊಂದಿರುವ ರೋಗಿಗಳು ಕೋವಿಡ್ ಪಾಸಿಟಿವ್ ವರದಿ ಪಡೆದ ಒಂದು ವಾರಗಳ ಬಳಿಕ ಹಾಗೂ ಮೂರು ದಿನಗಳ ಕಾಲ ಸತತವಾಗಿ ಜ್ವರವನ್ನು ಹೊಂದಿರದೇ ಇದ್ದಲ್ಲಿ ಹೋಂ ಐಸೋಲೇಷನ್ನ ಹೊಸ ನಿಯಮಾವಳಿಗಳ ಪ್ರಕಾರ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ. ಹಾಗೂ ಅವರ ಹೋಂ ಐಸೋಲೇಷನ್ ಅವಧಿಯು ಕೊನೆಗಳ್ಳುತ್ತದೆ. ಇಂತವರು ಪುನಃ ಕೊರೊನಾ ಪರೀಕ್ಷೆ ಮಾಡಿಸುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದೆ.
ದೇಶದಲ್ಲಿ ಕಳೆದ 9 ದಿನಗಳಲ್ಲಿ ಕೊರೊನಾ ಪ್ರಕರಣಗಳು ಆರು ಪಟ್ಟು ಅಧಿಕವಾಗಿದೆ. ಓಮಿಕ್ರಾನ್ ಪ್ರಕರಣಗಳು ಕಳೆದ ಮೂರು ದಿನಗಳಲ್ಲಿ ದ್ವಿಗುಣಗೊಂಡಿದೆ. ಆದರೆ ಆಸ್ಪತ್ರೆಯತ್ತ ಮುಖ ಮಾಡುತ್ತಿರುವ ಜನರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ಇದೇ ಕಾರಣಕ್ಕಾಗಿ ಹೋಂ ಐಸೋಲೇಷನ್ ನಿಯಮಾವಳಿಗಳನ್ನು ಪರಿಷ್ಕರಿಸಲಾಗಿದೆ. ಭಾರತದಲ್ಲಿ ಡೆಲ್ಟಾ ರೂಪಾಂತರಿಯಿಂದಾಗಿ ಪ್ರತಿಕೂಲ ಪರಿಣಾಮ ಉಂಟಾಗಿತ್ತು. ಆದರೆ ಆಫ್ರಿಕಾ ಮೂಲದ ಓಮಿಕ್ರಾನ್ ಇಷ್ಟೊಂದು ಭಯಾನಕವಾಗಿಲ್ಲ ಎಂದು ಸಧ್ಯಕ್ಕೆ ಭಾವಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.