ಉಡುಪಿ: ಹೊಂಡಕ್ಕೆ ಹಾರಿದ್ದ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿನ ತೋಟದಲ್ಲಿ ನಡೆದಿದೆ.
ಯಶೋಧ ಹಾಗೂ ಇಮ್ಯಾನುವಲ್ ಮೃತ ದಂಪತಿ. ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಜಗಳವಾಗಿತ್ತು. ಇದರಿಂದ ಮನನೊಂದ ಪತ್ನಿ ಯಶೋಧ ತೋಟದಲ್ಲಿದ್ದ ಹೊಂಡಕ್ಕೆ ಹಾರಿದ್ದಾರೆ. ಪತ್ನಿಯನ್ನು ರಕ್ಷಿಸಲು ಹೋಗಿದ್ದ ಪತಿ ಇಮ್ಯಾನುವಲ್ ಕೂಡ ನೀರಿನಲ್ಲಿ ಮುಳುಗಿದ್ದು, ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತ ದಂಪತಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದವರಾಗಿದ್ದು, ತೋಟದ ಕೆಲಸಕ್ಕಾಗಿ ಕಾರ್ಕಳದ ನಲ್ಲೂರಿಗೆ ಬಂದು ವಾಸವಾಗಿದ್ದರು.