
ದುಬೈ: ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎ ಗುಂಪಿನ ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ಭಾರತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿದ್ದು, ನ್ಯೂಜಿಲೆಂಡ್ ಗೆಲುವಿಗೆ 250 ರನ್ ಗುರಿ ನೀಡಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರವಾಗಿ ರೋಹಿತ್ ಶರ್ಮಾ 15, ಶುಭ ಮನ್ ಗಿಲ್ 2, ವಿರಾಟ್ ಕೊಹ್ಲಿ 11, ಶ್ರೇಯಸ್ ಅಯ್ಯರ್ 79, ಅಕ್ಷರ ಪಟೇಲ್ 42, ಕೆ.ಎಲ್. ರಾಹುಲ್ 23, ಹಾರ್ದಿಕ್ ಪಾಂಡ್ಯ 45, ರವೀಂದ್ರ ಜಡೇಜ 16, ಮಹಮ್ಮದ್ ಶಮಿ 5, ಕುಲದೀಪ್ ಯಾದವ್ ಅಜೇಯ 1, ವರುಣ್ ಚಕ್ರವರ್ತಿ 0 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್ ಪರವಾಗಿ ಮ್ಯಾತ್ ಹೆನ್ರಿ 5 ವಿಕೆಟ್ ಪಡೆದರು.