ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಹಾಸನಾಂಬೆ ದೇವಾಲಯದ ಬಾಗಿಲನ್ನು ಇಂದು ತೆರೆಯಲಾಗಿದ್ದು, ಈ ಸಂದರ್ಭದಲ್ಲಿ ಸಚಿವ ಗೋಪಾಲಯ್ಯ ಉಪಸ್ಥಿತರಿದ್ದರು.
ಮೊದಲ ದಿನವಾದ ಇಂದು ಭಕ್ತರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಅಕ್ಟೋಬರ್ 24ರವರೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಸೂರ್ಯ ಗ್ರಹಣ ದಿನದಂದು ಸಹ ಭಕ್ತರಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಅಕ್ಟೋಬರ್ 13 ರಿಂದ ಅಕ್ಟೋಬರ್ 27 ರವರೆಗೆ ದೇಗುಲದ ಬಾಗಿಲು ತೆರೆದಿರಲಾಗಿತ್ತಾದರೂ ಅಕ್ಟೋಬರ್ 25 ಮಂಗಳವಾರದಂದು ಸೂರ್ಯಗ್ರಹಣ ಇರುವುದರಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಮತ್ತೆ ಅ.26 ದೀಪಾವಳಿ ದಿನದಂದು ವಿಶೇಷ ದರ್ಶನಕ್ಕೆ ಅವಕಾಶ ಇರಲಿದ್ದು, ಬೆಳಗ್ಗೆ 6 ರಿಂದ ಸಂಜೆ 4ರ ತನಕ ದರ್ಶನ ನಡೆಯಲಿದೆ. ಮತ್ತೆ ರಾತ್ರಿ 11ರಿಂದ ಬೆಳಗ್ಗೆ 7ರ ತನಕ ಅವಕಾಶ ಇರಲಿದೆ. ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಅಕ್ಟೋಬರ್ 27ರಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.