
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಹೆಚ್ಚಿಸಿದೆ. ವಿತ್ತೀಯ ನೀತಿ ಸಮಿತಿಯ (ಎಂಪಿಸಿ) ಮೂರು ದಿನಗಳ ಕಾಲ ಚರ್ಚೆ ನಡೆಸಿದ ಬಳಿಕ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಈ ನಿರ್ಧಾರ ಪ್ರಕಟಿಸಿದರು.
ರೆಪೋ ದರ ಹೆಚ್ಚಾಗುತ್ತಿದ್ದಂತೆ ಬಡ್ಡಿದರ ಬದಲಾವಣೆಯಾಗುವ ಕಾರಣ ಇಎಂಐಗಳಲ್ಲಿ ವ್ಯತ್ಯಾಸವಾಗಲಿದೆ.
ಏರುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ನೀತಿ ಸಮಿತಿ ರೆಪೊ ದರವನ್ನು 40 ಮೂಲಾಂಕಗಳಿಂದ 4.4 ಶೇಕಡಾಗೆ ಏರಿಸಿತು. ಇದು ಆಗಸ್ಟ್ 2018ರ ನಂತರ ಮೊದಲ ದರ ಏರಿಕೆಯಾಗಿದೆ.
ಹಣದುಬ್ಬರವನ್ನು ನಿಯಂತ್ರಿಸಲು ರೆಪೋ ದರವನ್ನು ಪ್ರಮುಖ ಸಾಧನವೆಂದು ಪರಿಗಣಿಸಲಾಗುತ್ತದೆ. ರೆಪೋ ದರವು ಆರ್ ಬಿ ಐ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ದರವಾಗಿದೆ.
ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ 8 ವರ್ಷಗಳ ಗರಿಷ್ಠ ಮಟ್ಟವಾದ 7.79 ಶೇಕಡಾ ತಲುಪಿದ ಕಾರಣ ಬಡ್ಡಿದರದಲ್ಲಿ ಹೆಚ್ಚಳ ಅನಿವಾರ್ಯವಾಗಿದೆ.
ಇಂಧನ ಸೇರಿದಂತೆ ಹೆಚ್ಚುತ್ತಿರುವ ಸರಕುಗಳ ಬೆಲೆಗಳಿಂದ ಹಣದುಬ್ಬರವು ಹೆಚ್ಚುತ್ತಿದೆ. ರಷ್ಯಾ- ಉಕ್ರೇನ್ ಯುದ್ಧದಿಂದ ಪ್ರಪಂಚದಾದ್ಯಂತ ಸರಕುಗಳ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಹಣದುಬ್ಬರ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸರ್ಕಾರ ಪರದಾಡಬೇಕಾಗಿದೆ.