ಬೆಂಗಳೂರಿನಲ್ಲಿ ಲಂಚಬಾಕ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಹಾಯಕ ಡ್ರಗ್ಸ್ ಕಂಟ್ರೋಲರ್ ಅಜಯ್ ರಾಜ್ ಡಿ. ಶಾ ಅವರು ಲಂಚ ಸ್ವೀಕರಿಸುವಾಗಲೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.
ಮೆಡಿಕಲ್ ಶಾಪ್ ಗೆ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೋಲ್ ಸೇಲ್ ಮೆಡಿಕಲ್ ಶಾಪ್ ಗೆ ಅನುಮತಿ ಕೊಡಲು ಸುಬ್ರಹ್ಮಣ್ಯ ಎಂಬುವರ ಬಳಿ 40,000 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾರ್ ನಲ್ಲಿ ಶ್ರೀಲಂಚ ಸ್ವೀಕರಿಸುವಾಗ ಡ್ರಗ್ ಕಂಟ್ರೋಲರ್ ಅವರನ್ಜು ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಎಸ್.ಪಿ. ಶ್ರೀನಾಥ್ ಜೋಶಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.