ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಮತ್ತೊಂದು ಒಮಿಕ್ರಾನ್ ಸೋಂಕಿನ ಪ್ರಕರಣ ವರದಿಯಾಗಿದೆ. ಒಮಿಕ್ರಾನ್ ಸೋಂಕಿತ ವ್ಯಕ್ತಿ ಕೊರೊನಾದ ಎರಡೂ ಡೋಸ್ ಲಸಿಕೆಗಳನ್ನು ಪಡೆದಿದ್ದರೆಂದು ಹೇಳಲಾಗಿದೆ.
ಈ ಮೊದಲು ದೆಹಲಿಯಲ್ಲಿ ಒಂದು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಇಂದು ಮತ್ತೊಂದು ಪ್ರಕರಣ ಪತ್ತೆಯಾಗುವುದರೊಂದಿಗೆ ದೆಹಲಿಯಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ಕೊರೊನಾದ ಹೊಸ ರೂಪಾಂತರಿಯಾಗಿರುವ ಒಮಿಕ್ರಾನ್ ಅಷ್ಟೇನೂ ತೀವ್ರವಾದ ಪರಿಣಾಮ ಬೀರುವುದಿಲ್ಲವೆನ್ನಲಾಗಿದ್ದು, ಆದರೂ ಕೂಡಾ ಸಾರ್ವಜನಿಕರು ಮಾಸ್ಕ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ.