
ಕರ್ನಾಟಕದಲ್ಲಿ ಇಂದು ಒಮಿಕ್ರಾನ್ ಸ್ಪೋಟವಾಗಿದ್ದು ಬರೋಬ್ಬರಿ 165 ಪ್ರಕರಣಗಳು ವರದಿಯಾಗಿದೆ. ಇನ್ನು ಆತಂಕಕಾರಿ ಅಂಶವೆಂದರೆ ಅಷ್ಟು 165 ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ. 165 ಹೊಸ ಪ್ರಕರಣಗಳ ಮೂಲಕ ರಾಜ್ಯದ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 931ಕ್ಕೆ ಏರಿಕೆಯಾಗಿದೆ.
ಇನ್ನು ರಾಜ್ಯದ ಕೊರೋನಾ ವೈರಸ್ ಅಂಕಿಅಂಶ ನೋಡುವುದಾದರೆ, ನೆನ್ನೆ ಒಂದೇ ದಿನ 42,470 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು ಒಂದರಲ್ಲೆ 17,266 ಪ್ರಕರಣಗಳು ವರದಿಯಾಗಿದ್ದು, ರಾಜ್ಯದೆಲ್ಲೆಡೆ 2.18ಲಕ್ಷಕ್ಕು ಹೆಚ್ಚು ಸಕ್ರಿಯ ಪ್ರಕರಣಗಳಿವೆ. ರಾಜ್ಯದ ಪಾಸಿಟಿವಿಟಿ ರೇಟ್ 19.33% ಇದೆ.
