alex Certify BREAKING: ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ 2 ವರ್ಷ ಜೈಲು, ಪ್ರಸಿದ್ಧ ಗಾಯಕ ದಲೇರ್‌ ಮೆಹಂದಿ ಅರೆಸ್ಟ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ 2 ವರ್ಷ ಜೈಲು, ಪ್ರಸಿದ್ಧ ಗಾಯಕ ದಲೇರ್‌ ಮೆಹಂದಿ ಅರೆಸ್ಟ್‌

ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಪಂಜಾಬ್‌ನ ಪಟಿಯಾಲ ನ್ಯಾಯಾಲಯ ಗಾಯಕ ದಲೇರ್‌ ಮೆಹಂದಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಖಾಯಂಗೊಳಿಸಿದೆ. ಇದರ ಬೆನ್ನಲ್ಲೇ ಪಂಜಾಬ್‌ ಪೊಲೀಸರು ದಲೇರ್‌ ಮೆಹಂದಿಯನ್ನು ಬಂಧಿಸಿದ್ದಾರೆ.

2003 ರಲ್ಲಿ ನಡೆದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ದಲೇರ್‌ ಮೆಹಂದಿ ಶಿಕ್ಷೆಗೊಳಗಾಗಿದ್ದಾರೆ. 2018ರಲ್ಲೇ ಶಿಕ್ಷೆ ಪ್ರಕಟವಾಗಿತ್ತು. ಆದ್ರೆ ದಲೇರ್‌ ಮೆಹಂದಿ ಇದನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಈ ಹಿಂದೆ  ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. ಈ ಹಿಂದೆ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಗಾಯಕ, ನಂತರ ಜಾಮೀನಿನ ಮೇಲೆ ಹೊರಬಂದಿದ್ದರು. ದಲೇರ್‌ ಮೆಹಂದಿಯನ್ನು ತಕ್ಷಣವೇ ಬಂಧಿಸುವಂತೆ ಕೋರ್ಟ್ ಸೂಚಿಸಿದ್ದರಿಂದ ಪೊಲೀಸರು ಅವರನ್ನು ಅರೆಸ್ಟ್‌ ಮಾಡಿದ್ದಾರೆ.

2003ರಲ್ಲಿ ಸದರ್ ಪಟಿಯಾಲಾ ಪೊಲೀಸ್ ಠಾಣೆಯಲ್ಲಿ ದಲೇರ್‌ ಮೆಹಂದಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ದಲೇರ್‌ ಮೆಹಂದಿ ಅವರ ಮೃತ ಸಹೋದರ ಶಂಶೇರ್ ಸಿಂಗ್ ಮತ್ತು ಇತರ ಇಬ್ಬರ ಹೆಸರಿತ್ತು. ಗಾಯಕನ ವಿರುದ್ಧ ಇದೇ ರೀತಿಯ 35 ದೂರುಗಳು ಬಂದಿವೆ. ಕೆಲವು ದೂರುದಾರರ ಪ್ರಕಾರ ದಲೇರ್‌ ಮೆಹಂದಿ ಕೆನಡಾ ಮತ್ತು ಯುಎಸ್ಎಗೆ ಅಕ್ರಮವಾಗಿ ಜನರನ್ನು ಕಳುಹಿಸುತ್ತಾರೆ. ಇದಕ್ಕಾಗಿ ಒಬ್ಬೊಬ್ಬರಿಂದ 12 ಲಕ್ಷ ರೂಪಾಯಿವರೆಗೂ ಹಣ ಪಡೆಯುತ್ತಾರಂತೆ.

ದೊಡ್ಡ ಮೊತ್ತಕ್ಕೆ ಬದಲಾಗಿ ಅವರ ವಿದೇಶಿ ಪ್ರದರ್ಶನಗಳಲ್ಲಿ ತಮ್ಮ ನೃತ್ಯ ತಂಡಗಳ ಭಾಗವಾಗಿ ಜನರನ್ನು ವಿದೇಶಕ್ಕೆ ಕಳುಹಿಸುವುದಾಗಿ ಅವರು ಭರವಸೆ ನೀಡುತ್ತಿದ್ದರು. ಪಂಜಾಬ್ ಪೊಲೀಸರು ದಲೇರ್ ಮೆಹಂದಿ ಅವರ ಹೊಸದಿಲ್ಲಿಯಲ್ಲಿರುವ ಕನ್ನಾಟ್ ಪ್ಲೇಸ್ ಮೂಲದ ಕಚೇರಿ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡ ನಂತರ ಅವರ ವಿರುದ್ಧ ಸಾಕಷ್ಟು ಪುರಾವೆಗಳು ಸಿಕ್ಕಿದ್ದವು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...