
ರಾಮನಗರ: ಕರ್ತವ್ಯ ನಿರತ ಪೊಲಿಸರು ಕಂಠಪೂರ್ತಿ ಮದ್ಯಪಾನ ಮಾಡಿ ಸಾರ್ವಜನಿಕರೊಂದಿಗೆ ಕಿರಿಕ್ ಮಾಡಿರುವುದೂ ಅಲ್ಲದೇ, ನಿಂದಿಸಿದ ಘಟನೆ ರಾಮನಗರ ಜಿಲ್ಲೆ ಮಾಗಡಿಯಲ್ಲಿ ನಡೆದಿದೆ.
ಮದ್ಯಪಾನ ಮಾಡಿ ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ಎ ಎಸ್ ಐ ಹಾಗೂ ಓರ್ವ ಹೆಡ್ ಕಾನ್ಸ್ ಟೇಬಲ್ ಸಾರ್ವಜನಿಕರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಮನಗರ ಎಸ್ ಪಿ ಕಾರ್ತಿಕ್ ಇಬ್ಬರು ಎಎಸ್ಐ ಹಾಗೂ ಹೆಡ್ ಕಾನ್ಸ್ ಟೇಬಲ್ ಸೇರಿ ಮೂವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಚೆನ್ನಪಟ್ಟಣ ಠಾಣೆಯ ಸಿ ನಾರಾಯಣಮೂರ್ತಿ, ಮಾಗಡಿ ಪೊಲೀಸ್ ಠಾಣೆಯ ಎ ಎಸ್ ಐ ಮಂಜುನಾಥ್ ಸೇರಿ ಮೂವರು ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ.