ಬೆಳಗಾವಿ: ಸಿಮಿಂಟ್ ಲಾರಿ, ಕಾರು ಹಾಗೂ ಬೈಕ್ ಗೆ ದಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಎಎಸ್ಐ ಪತ್ನಿ ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ-ಬಾಗಲಕೋಟೆ ರಸ್ತೆಯ ಬೂದಿಗೊಪ್ಪ ಕ್ರಾಸ್ ಬಳಿ ನಡೆದಿದೆ.
ಸಿಮೆಂಟ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರು ಹಾಗೂ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಕುಡುಚಿ ಪೊಲೀಸ್ ಠಾಣೆ ಎ ಎಸ್ ಐ ಓರ್ವರ ಪತ್ನಿ, ಪುತ್ರಿ, ಕಾರು ಚಾಲಕ ಹಾಗೂ ಬೈಕ್ ನಲ್ಲಿದ್ದ ವೃದ್ಧೆ ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಡಚಿ ಠಾಣೆಯ ಎಎಸ್ಐ ಹಲಕಿ ಅವರ ಪತ್ನಿ ರೇಣುಕಾ (48),ಎಎಸ್ಐ ಹಲಕಿ ಅವರ ಪುತ್ರಿ ಅಕ್ಷತಾ (22), ಕಾರು ಚಾಲಕ ಬೆಳಗಾವಿಯ ನಿಖಿಲ್ ಕದಂ (24) ಹಾಗೂ ಅಪಘಾತಕ್ಕೊಳಗಾದ ಬೈಕಿನಲ್ಲಿ ಹಿಂಬದಿ ಕುಳಿತಿದ್ದ ಹನಮವ್ವ ( 66) ಮೃತರು.
ಘಟನಾ ಸ್ಥಳಕ್ಕೆ ಎಸ್ ಪಿ ಸಂಜೀವ ಪಾಟೀಲ್, ಹೆಚ್ಚುವರಿ ಎಸ್ ಪಿ ಮಹಾನಂದ ನಂದಗಾವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.